ಮೋಶೆಯ ಕಾಲದಲ್ಲಿ, ಪಸ್ಕವನ್ನು ಆಚರಿಸಿದ ಇಸ್ರಾಯೇಲ್ಯರನ್ನು ದೇವರು ಉಪದ್ರವಗಳಿಂದ ರಕ್ಷಿಸಿದರು ಮತ್ತು ಪಸ್ಕವನ್ನು ಆಚರಿಸದ ಎಲ್ಲಾ ಐಗುಪ್ತದ ಕುಟುಂಬಗಳನ್ನು ಶಿಕ್ಷಿಸಿದರು. ಈ ಕಾಲದಲ್ಲಿ ನಾವು ವಿಪತ್ತುಗಳಿಂದ ಹೇಗೆ ಪಾರಾಗಬಹುದು ಮತ್ತ ನಿತ್ಯಜೀವವನ್ನು ಹೇಗೆ ಸ್ವೀಕರಿಸಿಬಹುದು ಎಂಬುದನ್ನು ಇದು ನಮಗೆ ತೋರಿಸುತ್ತದೆ.
ಹೊಸ ಒಡಂಬಡಿಕೆಯ ಪಸ್ಕವು ಮಾನವಕುಲವು ದೇವರ ಮಾಂಸ ಮತ್ತು ರಕ್ತವನ್ನು ಬಾಧ್ಯವಾಗಿ ಪಡೆಯುವ ಮತ್ತು ದೇವರ ಮಕ್ಕಳೆಂದು ಮುದ್ರೆಯನ್ನು ಹೊಂದುವ ದಿನವಾಗಿದೆ, ಮತ್ತು ಇದು ಅವರು ಪರಲೋಕದಲ್ಲಿ ಮಾಡಿದ ಪಾಪಗಳು ಕ್ಷಮಿಸಲ್ಪಡುವ ಮತ್ತು ನಿತ್ಯಜೀವವನ್ನು ಸ್ವೀಕರಿಸುವ ದಿನವಾಗಿದೆ.
ಅದಕ್ಕಾಗಿಯೇ ಇಡೀ ಲೋಕವು ಪಸ್ಕವನ್ನು ಆಚರಿಸಿ ರಕ್ಷಣೆಯನ್ನು ಸ್ವೀಕರಿಸಲೆಂದು ಕುತೂಹಲದಿಂದ ಬಯಸುತ್ತಾ ದೇವರು ಪವಿತ್ರ ಪಂಚಾಂಗದ ಪ್ರಕಾರ ಎರಡನೆಯ ತಿಂಗಳಿನ 14 ನೇ ದಿನದಂದು ಪಸ್ಕಹಬ್ಬವನ್ನು ಆಚರಿಸಲು ಮತ್ತೊಂದು ಅವಕಾಶವನ್ನು ನೀಡುತ್ತಾರೆ.
ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - . . . ಯೆಹೋವನ ಆಜ್ಞಾನುಸಾರ ಪಸ್ಕಹಬ್ಬವನ್ನು ಆಚರಿಸಲೇಬೇಕು. ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೇವೇಳೆಯಲ್ಲಿ ಅದನ್ನು ಆಚರಿಸಬೇಕು. ಆ ಪಶುವಿನ ಮಾಂಸವನ್ನು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಂಗಡ ಊಟಮಾಡಬೇಕು . . . ಪಸ್ಕಹಬ್ಬವನ್ನು ಆಚರಿಸದೆ ತಪ್ಪಿದರೆ ಅವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು. ಅವನು ಯೆಹೋವನಿಂದ ನೇವಿುತವಾದ ಯಜ್ಞವನ್ನು ಗೊತ್ತಾದ ಕಾಲದಲ್ಲಿ ಸಮರ್ಪಿಸದೆ ಹೋದದರಿಂದ ತನ್ನ ದೋಷಫಲವನ್ನು ಅನುಭವಿಸಬೇಕು.
ಅರಣ್ಯಕಾಂಡ 9:10-13
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ