ನಾವು ದೇವರ ವಾಗ್ದಾನಗಳನ್ನು ಮುರಿದು ಪವಿತ್ರತೆ ಮತ್ತು ದೈವಭಕ್ತಿಯಿಂದ ದೂರ ಸರಿದರೆ, ನಾವು ನ್ಯಾಯತೀರ್ಪಿಗೆ ಒಳಗಾಗುತ್ತೇವೆ. ನೋಹನ ಸಮಯದಲ್ಲಿ, ಸೊದೋಮ್ ಮತ್ತು ಗೊಮೋರದಲ್ಲಿ ಮತ್ತು ಈ ಕಡೇ ಯುಗದಲ್ಲಿ ಲೋಕದ ಮೇಲಿನ ದೇವರ ನ್ಯಾಯತೀರ್ಪಿನ ಹಿಂದೆ ಒಂದು ಸಾಮಾನ್ಯ ಅಂಶವಿದೆ: ಜನರು ದೇವರನ್ನು ತ್ಯಜಿಸಿ ದ್ರೋಹಿಗಳು, ದುಷ್ಟರು ಮತ್ತು ವ್ಯಭಿಚಾರಿಗಳಾದರು.
ನೋಹನಂತೆ, ಇಂದು, ನಾವು ಕಾಣದ ಸಂಗತಿಗಳಲ್ಲಿ ದೃಢ ನಂಬಿಕೆ ಹೊಂದಿರಬೇಕು. ದೇವರು ದುಷ್ಟ ಲೋಕಕ್ಕೆ ಬೆಂಕಿಯಿಂದ ನ್ಯಾಯತೀರ್ಪು ಮಾಡುವರೆಂಬ ಸತ್ಯವೇದದ ಪ್ರವಾದನೆಯನ್ನು ನಂಬುತ್ತಾ, ಚರ್ಚ್ ಆಫ್ ಗಾಡ್ ಲೋಕವನ್ನು ವಿಪತ್ತುಗಳಿಂದ ರಕ್ಷಿಸುವ ದೇವರ ವಾಗ್ದಾನವುಳ್ಳ ಹೊಸ ಒಡಂಬಡಿಕೆಯ ಪಸ್ಕ ಹಬ್ಬವನ್ನು ಬೋಧಿಸುತ್ತದೆ.
ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು. ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ. 2 ಪೇತ್ರನು 3:6–7
...ಇದು ಯೆಹೋವನಿಗೆ ಆಚರಿಸತಕ್ಕ ಪಸ್ಕಹಬ್ಬವು. [ನೀವು ಬಾಗಲಿಗೆ ಹಚ್ಚಿದ] ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವದಾದ ಕಾರಣ ನಾನು ಅದನ್ನು ಕಂಡು ನಿಮಗೆ ಯಾವ ನಷ್ಟವನ್ನೂ ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಐಗುಪ್ತದವರನ್ನು ಸಂಹರಿಸುವಾಗ ನಿಮಗೆ ಯಾವ ಹಾನಿಯೂ ಉಂಟಾಗುವದಿಲ್ಲ. ವಿಮೋಚನಕಾಂಡ 12:11–13
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ