ವಿಗ್ರಹಾರಾಧನೆಯಲ್ಲಿ ಬಿದ್ದಿದ್ದ ಇಸ್ರಾಯೇಲ್ಯರ ಪಾಪಗಳನ್ನು ಕ್ಷಮಿಸಿ ಅವರಿಗೆ ಹತ್ತು ಆಜ್ಞೆಗಳ ಎರಡನೇ ಗುಂಪನ್ನು ನೀಡಿದ ಸಮಯವನ್ನು ಸ್ಮರಿಸುವ ಸರ್ವದೋಷಪರಿಹಾರಕ ದಿನವನ್ನು ನಾವು ನೆನಪಿಸಿಕೊಳ್ಳುವಂತೆ, ದೇವರು ಪವಿತ್ರ ಪಂಚಾಂಗದ ಏಳನೇ ತಿಂಗಳಿನ ಮೊದಲ ದಿನವನ್ನು ತುತೂರಿಗಳ ಹಬ್ಬವಾಗಿ ನೇಮಿಸಿದರು. ಇದಲ್ಲದೆ, ಪಶ್ಚಾತ್ತಾಪಕ್ಕಾಗಿ ಕರೆ ನೀಡಲು ತುತೂರಿಗಳ ಹಬ್ಬದಂದು ತುತೂರಿಗಳನ್ನು ಊದಿದಂತೆಯೇ, ಯೇಸು ಕೂಡ ಈ ಭೂಮಿಗೆ ಬಂದು “ಪಶ್ಚಾತ್ತಾಪಪಡಿರಿ” ಎಂದು ಹೇಳುತ್ತಾ ಮನುಕುಲವನ್ನು ಪಶ್ಚಾತ್ತಾಪಪಡುವಂತೆ ಕರೆ ನೀಡಿದರು.
ದುಂದುಗಾರ ಮಗನ ಸಾಮ್ಯ ಮತ್ತು ನಿನೆವೆಯಲ್ಲಿ 1,20,000 ಜನರನ್ನು ಆತ್ಮರಕ್ಷಣೆಯ ಕಡೆ ಮುನ್ನಡೆಸಿದ ಯೋನನ ವೃತ್ತಾಂತದಲ್ಲಿ ನಾವು ನೋಡಬಹುದಾದಂತೆ, ಪಶ್ಚಾತ್ತಾಪದ ಕೆಲಸದ ನಂತರ ದೇವರಿಂದ ಬರುವ ಮಹಾನ್ ಆಶೀರ್ವಾದಗಳು ಯಾವಾಗಲೂ ಸಿದ್ಧವಾಗಿರುತ್ತವೆ. ಇಂದು ಸಹ, ಲೋಕದ ಕಡೆಗೆ ತಿರುಗಿರುವ ನಮ್ಮ ಕಣ್ಣುಗಳು ಮತ್ತು ಹೃದಯಗಳಿಗಾಗಿ ನಾವು ಯೋನನಂತೆ ಸಂಪೂರ್ಣ ಪಶ್ಚಾತ್ತಾಪವನ್ನು ಸಾಧಿಸಬೇಕು ಮತ್ತು ಇಡೀ ಲೋಕವು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬಳಿಗೆ ಹಿಂತಿರುಗುವಂತೆ ಕರೆ ನೀಡುವ ತುತೂರಿಯನ್ನು ಊದಬೇಕು.
ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು - ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಕೂಡಬೇಕು.
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪುಮಾಡುವೆನು; ಅಧರ್ಮವು ನಿಮ್ಮನ್ನು ನಾಶಮಾಡದಂತೆ ತಿರುಗಿಕೊಂಡು ನಿಮ್ಮ ಅಪರಾಧಗಳನ್ನೆಲ್ಲಾ ಬಿಟ್ಟುಬಿಡಿರಿ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ