ದೇವರನ್ನು ನಂಬುವವರು ದೇವರ ಬೋಧನೆಗಳ ಪ್ರಕಾರ ಪರ್ಣಶಾಲೆಗಳ ಹಬ್ಬವನ್ನು ಆಚರಿಸಬೇಕು. ಅದೇಕೆಂದರೆ ದೇವರು ಪ್ರವಾದಿ ಜೆಕರ್ಯನ ಮೂಲಕ ಪರ್ಣಶಾಲೆಗಳ ಹಬ್ಬವನ್ನು ಆಚರಿಸುವವರಿಗೆ ಪವಿತ್ರಾತ್ಮವನ್ನು ಕೊಡುವುದಾಗಿಯೂ ಆಚರಿಸದವರಿಗೆ ಶಿಕ್ಷೆಯನ್ನು ತರುವುದಾಗಿಯೂ ಹೇಳಿದ್ದಾರೆ.
ಯೇಸು ತಮ್ಮ ಮೊದಲನೆಯ ಬರುವಿಕೆಯಲ್ಲಿ ಪವಿತ್ರಾತ್ಮವನ್ನು ನೀಡಿದರು; ತಮ್ಮ ಎರಡನೆಯ ಬರುವಿಕೆಯಲ್ಲಿ, ಪರ್ಣಶಾಲೆಗಳ ಹಬ್ಬದಂದು ಆತ್ಮನೂ ಮದಲಗಿತ್ತಿಯೂ ಪವಿತ್ರಾತ್ಮವನ್ನು ನೀಡುತ್ತಾರೆ. “ಆತ್ಮನೂ ಮದಲಗಿತ್ತಿಯೂ ಜೀವಜಲವನ್ನು ಕೊಡುತ್ತಾರೆ,” “ಯೆರೂಸಲೇಮಿನಿಂದ ಜೀವಜಲವು ಹರಿಯುವುದು,” ಮತ್ತು “ಜೀವಜಲದ ನದಿಯು ದೇವರ ಸಿಂಹಾಸನದಿಂದ ಹರಿಯುತ್ತದೆ” ಎಂಬ ಸತ್ಯವೇದದ ಪ್ರವಾದನೆಗಳು, ಯೆರೂಸಲೇಮ್ ಪರಲೋಕದ ತಾಯಿ ಪವಿತ್ರಾತ್ಮವನ್ನು ಮತ್ತು ಜೀವಕ್ಕೆ ನಡೆಸುವ ಬೋಧನೆಗಳನ್ನು ನೀಡುತ್ತಾರೆ ಎಂದು ಪ್ರವಾದಿಸುತ್ತವೆ.
ಪರ್ಣಶಾಲೆಗಳ ಹಬ್ಬವೆಂಬ ಯೆಹೂದ್ಯರದೊಂದು ಜಾತ್ರೆಯು ಸಮೀಪವಾದಾಗ... ಆ ಜಾತ್ರೆಯ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು -... ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಜೀವಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು. ಇದನ್ನು ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೇಳಿದನು;... ಯೋಹಾನನು 7:2–39
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ. ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ