ಈ ಕಾಲವನ್ನು ದೊಡ್ಡ ಬಿಕ್ಕಟ್ಟಿನ ಸಮಯ ಎಂದು ಸತ್ಯವೇದವು ಪ್ರವಾದಿಸುತ್ತದೆ.
ರಾಷ್ಟ್ರಗಳ ನಡುವಿನ ಯುದ್ಧಗಳು ಮತ್ತು ಅಸಂಖ್ಯಾತ ಹವಾಮಾನ ವಿಪತ್ತುಗಳು ಬಯಲಾಗುತ್ತಿದ್ದಂತೆ,
ಜನರು ಬಾಹ್ಯಾಕಾಶಕ್ಕೆ, ಸಾಗರದ ಆಳಕ್ಕೆ ಅಥವಾ ಆಳವಾದ ಭೂಗತಕ್ಕೆ ತಪ್ಪಿಸಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತಾರೆ.
ಎಷ್ಟಾದರೂ, ಸತ್ಯವೇದವು ತಾಯಿ ದೇವರು ನೆಲೆಸಿರುವ ಚೀಯೋನ್’ಅನ್ನು ಹೊರತುಪಡಿಸಿ ಯಾವುದೇ ಆತ್ಮರಕ್ಷಣೆಯ ಆಶ್ರಯವಿಲ್ಲ ಎಂದು ಹೇಳುತ್ತದೆ.
ದೇವರು ದಾನಿಯೇಲನಿಗೆ ಅರಸ ನೆಬೂಕದ್ನೆಚ್ಚರನ ಕನಸನ್ನು ಬಹಿರಂಗಪಡಿಸಿ ಅದನ್ನು ಅರ್ಥೈಸಿದಂತೆಯೇ,
ಇಂದು ಅವರು ವಿಪತ್ತುಗಳ ನಡುವೆ ಸುರಕ್ಷಿತವಾದ ಆಶ್ರಯವು ತಾಯಿ ದೇವರು ಎಂದು ಬಹಿರಂಗಪಡಿಸಿದ್ದಾರೆ.
ಆಪತ್ತಿನ ಸಮಯದಲ್ಲಿ ಮಕ್ಕಳು ತಮ್ಮ ತಾಯಿಯ ತೋಳುಗಳಲ್ಲಿ ಸುರಕ್ಷಿತವಾಗಿರುವಂತೆಯೇ,
ವಿಪತ್ತಿನಲ್ಲಿ ಮನುಕುಲಕ್ಕೆ ತಾಯಿ ದೇವರು ಅತ್ಯಂತ ಸುರಕ್ಷಿತ ಸ್ಥಳವೆಂದು ದೇವರು ಬಹಿರಂಗಪಡಿಸಿದ್ದಾರೆ.
ಯೆಹೋವನು ಇಂತೆನ್ನುತ್ತಾನೆ - ನಾನು ಭೂಮಂಡಲದಿಂದ ಸಮಸ್ತವನ್ನು ಅಳಿಸಿಬಿಡುವೆನು.
ಜನಪಶುಗಳನ್ನೂ ಆಕಾಶದ ಪಕ್ಷಿಗಳನ್ನೂ ಸಮುದ್ರದ ಮೀನುಗಳನ್ನೂ ನಾಶಪಡಿಸುವೆನು; ವಿಗ್ರಹಗಳೆಂಬ ವಿಘ್ನಗಳನ್ನೂ ಅವುಗಳಿಗೆ ಎಡವುವ ದುಷ್ಟರನ್ನೂ ಸಂಹರಿಸುವೆನು; ಭೂಮಿಯ ಮೇಲಿಂದ ನರಸಂತಾನವನ್ನು ಕಿತ್ತುಹಾಕುವೆನು; ಇದು ಯೆಹೋವನ ನುಡಿ.
ಚೆಫನ್ಯನು 1:2-3
ಆದರೆ ಆ ಕೆಟ್ಟ ಆಳು - ನನ್ನ ಯಜಮಾನನು ತಡಮಾಡುತ್ತಾನೆ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು
ತನ್ನ ಜೊತೆ ಆಳುಗಳನ್ನು ಹೊಡೆಯುವದಕ್ಕೆ ತೊಡಗಿ ಕುಡಿಕರ ಸಂಗಡ ತಿನ್ನುತ್ತಾ ಕುಡಿಯುತ್ತಾ ಇರುವದಾದರೆ,
ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾಗಿ ಹೊಡಿಸಿ
ಕಪಟಿಗಳಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.
ಮತ್ತಾಯನು 24:48-51
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ