ಗಿದ್ಯೋನನು ಇಸ್ರಾಯೇಲ್ಯರ ಎಲ್ಲಾ ಕುಲಗಳಲ್ಲಿ ಕನಿಷ್ಠ ಕುಲಕ್ಕೆ ಸೇರಿದವನು, ಅವನ ಕುಟುಂಬದಲ್ಲಿ ಅವನು ಅಲ್ಪನು. ಆದರೂ ಅವನು ದೇವರ ವಾಕ್ಯವನ್ನು ಪಾಲಿಸುವ ಮೂಲಕ 300 ಸೈನಿಕರೊಂದಿಗೆ 1,35,000 ಮಿದ್ಯಾನ್ಯರನ್ನು ಸೋಲಿಸಲು ಶಕ್ತನಾದನು. ಮೋಶೆ ಮತ್ತು ಯೆಹೋಶುವನು ಕೂಡ ದೇವರ ಮಾತಿಗೆ ವಿಧೇಯರಾಗುವ ಮೂಲಕ ಅಮಾಲೇಕ್ಯರ ವಿರುದ್ಧದ ಯುದ್ಧದಲ್ಲಿ ಗೆದ್ದರು. ಅದೇ ರೀತಿಯಲ್ಲಿ, ಇಂದೂ ಸಹ, ಎಲ್ಲಾ ಸಂದರ್ಭಗಳಲ್ಲಿ ಜಯವು ದೇವರ ಸಹಾಯವನ್ನು ನಂಬುವುದರಿಂದ ಮತ್ತು ಆತನಿಗೆ ವಿಧೇಯರಾಗುವ ಮೂಲಕ ಬರುತ್ತದೆ.
ಯೆಶಾಯನು ಪ್ರವಾದಿಸಿದಂತೆ, “ದೇವರು ಅಲ್ಪನಿಂದ ಬಲವಾದ ಜನಾಂಗವಾಗುವನ್ನು ಉಂಟುಮಾಡುವರು,” ಈ ಭೂಮಿಯ ಮೇಲಿನ ಎಲ್ಲವೂ ದೇವರ ಯೋಜನೆಯ ಪ್ರಕಾರವೇ ನೆರವೇರುತ್ತಿದೆ ಎಂದು ಅರಿತುಕೊಂಡು ದೇವರ ವಾಕ್ಯವು ಕ್ಷುಲ್ಲಕವೆಂದು ತೋರಿದರೂ ಅದನ್ನು ಪಾಲಿಸುವವರು ಆಶೀರ್ವದಿಸಲ್ಪಡುತ್ತಾರೆ.
ಆಗ ಗಿದ್ಯೋನನು ಆತನಿಗೆ - ಸ್ವಾಮೀ, . . . ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು ಅನ್ನಲು ಯೆಹೋವನು ಅವನಿಗೆ - ನಾನು ನಿನ್ನ ಸಂಗಡ ಇರುವದರಿಂದ ನೀನು ವಿುದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ ಅಂದನು.
ನ್ಯಾಯಸ್ಥಾಪಕರು 6:15-16
ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು; ನನ್ನ ಪ್ರಭಾವಕ್ಕೋಸ್ಕರ ನಾನು ನೆಟ್ಟ ಸಸಿಯಾಗಿಯೂ ನನ್ನ ಕೈ ಸೃಷ್ಟಿಸಿದ ಪ್ರಜೆಯಾಗಿಯೂ ದೇಶವನ್ನು ಸದಾ ಅನುಭವಿಸುವರು. ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.
ಯೆಶಾಯ 60:21-22
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ