ಸತ್ಯವೇದವು ಕಾಲ್ಪನಿಕವಲ್ಲ; ಅದು ಮನುಕುಲದ ಭವಿಷ್ಯವನ್ನು ಖಾತರಿಪಡಿಸುವ ದೇವರಿಂದ ಬಂದ ಜೀವದ ವಾಕ್ಯವಾಗಿದೆ. ಬಾಬೆಲ್ ಸಾಮ್ರಾಜ್ಯದ ನಂತರ, ರಾಜ್ಯಗಳ ಉದಯ ಮತ್ತು ಪತನದ ಬಗ್ಗೆ ದಾನಿಯೇಲನಿಗೆ ನೀಡಲಾದ ಪ್ರವಾದನೆಗಳು ಹಾಗೂ 3,500 ವರ್ಷಗಳ ಹಿಂದೆ ಯೋಬನಿಗೆ ಬಹಿರಂಗಪಡಿಸಲಾದ ಜಲಚಕ್ರದ ವಿವರಣೆ ಮತ್ತು ಭೂಮಿಯು ಬಾಹ್ಯಾಕಾಶದಲ್ಲಿ ತೂಗುಹಾಕಲ್ಪಟ್ಟಿರುವಂತಹ ವೈಜ್ಞಾನಿಕ ಸಂಗತಿಗಳ ಮೂಲಕ, ಸತ್ಯವೇದವು ದೇವರ ವಾಕ್ಯವೆಂದು ನಾವು ಖಚಿತವಾಗಿ ತಿಳಿದುಕೊಳ್ಳಬಹುದು.
ಅಪೊಸ್ತಲ ಯೋಹಾನನು ರಕ್ಷಣೆ ಹೊಂದುವ ದೇವಜನರನ್ನು ಅಂದರೆ ಯಜ್ಞದ ಕುರಿಯಾದಾತನ ಜೀವಬಾಧ್ಯರ ಪಟ್ಟಿಯಲ್ಲಿ ಹೆಸರುಗಳು ಬರೆಯಲ್ಪಟ್ಟವರನ್ನು ನೋಡಿದನು. ಇಂದು, ಅಪೊಸ್ತಲ ಯೋಹಾನನು ಮುನ್ನೋಡಿದಂತೆ ಜೀವಬಾಧ್ಯರ ಪಟ್ಟಿಯಲ್ಲಿ ಹೆಸರುಗಳು ಬರೆಯಲ್ಪಟ್ಟಿರುವ ಚರ್ಚ್ ಆಫ್ ಗಾಡ್ನ ಸದಸ್ಯರು, ಪರಲೋಕರಾಜ್ಯದಲ್ಲಿ ತಾವು ಆನಂದಿಸಲಿರುವ ಶಾಶ್ವತ ಮಹಿಮೆಯಿಂದ ಆಳವಾಗಿ ಪ್ರೇರಿತರಾಗಿ ಪ್ರವಾದನೆಗಳನ್ನು ನೆರವೇರಿಸುತ್ತಾರೆ.
ಆದರೆ ರಾಜ್ಯವು ಪರಾತ್ಪರನ ಭಕ್ತರಿಗೆ ಲಭಿಸುವದು, ಅವರೇ ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವರು ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು. ದಾನಿಯೇಲನು 7:18
ಇನ್ನು ರಾತ್ರಿ ಇರುವದಿಲ್ಲ; ಅವರಿಗೆ ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗುವದಿಲ್ಲ; ದೇವರಾದ ಕರ್ತನೇ ಅವರಿಗೆ ಬೆಳಕನ್ನು ಕೊಡುವನು; ಅವರು ಯುಗಯುಗಾಂತರಗಳಲ್ಲಿಯೂ ಆಳುವರು. ಪ್ರಕಟನೆ 22:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ