2,000 ವರ್ಷಗಳ ಹಿಂದೆ ಯೇಸು ಈ ಭೂಮಿಗೆ ಬಂದು ಹೊಸ ಒಡಂಬಡಿಕೆಯ ಪಸ್ಕವನ್ನು ಸ್ಥಾಪಿಸಿದಾಗ ಆತ್ಮರಕ್ಷಣೆಯನ್ನು ನೀಡಿದ ಸಭೆ ಮತ್ತು ಅಪೊಸ್ತಲರಾದ ಪೌಲ, ಪೇತ್ರ ಮತ್ತು ಯೋಹಾನನಂತಹ ಆದಿ ಸಭೆಯ ದೇವಜನರು ಹೋಗುತ್ತಿದ್ದ ಸಭೆ ಚರ್ಚ್ ಆಫ್ ಗಾಡ್ ಆಗಿತ್ತು. ಎಷ್ಟಾದರೂ, 4ನೇ ಶತಮಾನದ ಸುಮಾರಿಗೆ, ದೇವರ ನಿಯಮಗಳನ್ನು ರದ್ದುಗೊಳಿಸಲಾಯಿತು ಮತ್ತು ಅನ್ಯಧರ್ಮದ ಆಚರಣೆಗಳು ಸಭೆಯೊಳಗೆ ನುಸುಳಿದವು. ಆತ್ಮರಕ್ಷಣೆಯ ಬೆಳಕು ಕಣ್ಮರೆಯಾಯಿತು ಮತ್ತು ಕತ್ತಲೆಯ ಕಾಲ ಪ್ರಾರಂಭವಾಯಿತು.
ಸತ್ಯವೇದದ ಪ್ರವಾದನೆಯ ಪ್ರಕಾರ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು 1964ರಲ್ಲಿ ಕೊರಿಯಾದಲ್ಲಿ ಚರ್ಚ್ ಆಫ್ ಗಾಡ್ ಅನ್ನು ಸ್ಥಾಪಿಸಿದರು ಹಾಗೂ ಸತ್ಯವೇದ ಮತ್ತು ಪ್ರವಾದಿಗಳ ಅಸ್ತಿವಾರವನ್ನು ಆಧರಿಸಿದ ಹೊಸ ಒಡಂಬಡಿಕೆಯ ಪಸ್ಕದ ಸತ್ಯದೊಂದಿಗೆ ಸಭೆಯನ್ನು ಮುನ್ನಡೆಸಿದರು. “ಪೇತ್ರ ಯೇಸುವನ್ನು ಹಿಂಬಾಲಿಸಿದನು ಮತ್ತು ನಾನು ತಾಯಿಯನ್ನು ಹಿಂಬಾಲಿಸುವೆನು” ಎಂದು ಹೇಳುತ್ತಾ, ಮನುಕುಲವನ್ನು ರಕ್ಷಿಸಲು ಈ ಭೂಮಿಗೆ ಬಂದ ತಾಯಿ ದೇವರ ಬಗ್ಗೆ ಅವರು ತನ್ನ ಮಕ್ಕಳಿಗೆ ಸಾಕ್ಷಿಕರಿಸಿದರು.
ಸೊಸ್ಥೆನನೂ ಕೊರಿಂಥದಲ್ಲಿನ ದೇವರ ಸಭೆಗೆ ಅಂದರೆ ಕ್ರಿಸ್ತೇಸುವಿನಲ್ಲಿ ಪ್ರತಿಷ್ಠಿತರೂ ದೇವಜನರಾಗುವದಕ್ಕೆ ಕರೆಯಲ್ಪಟ್ಟವರೂ ಆಗಿರುವವರಿಗೆ . . . 1 ಕೊರಿಂಥದವರಿಗೆ 1:2
ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. ಎಫೆಸದವರಿಗೆ 2:20
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ