ಪವಿತ್ರಾತ್ಮನ ಯುಗದಲ್ಲಿ, ದೇವರು ಸತ್ಯವೇದದಲ್ಲಿ ಸ್ತ್ರೀ ಮತ್ತು ಆಕೆಯ ಉಳಿದ ಸಂತಾನದವರು ಹಾಗೂ ಸೈತಾನ ಮತ್ತು ಆತನ ಹಿಂಬಾಲಿಕರ ನಡುವೆ ದೊಡ್ಡ ಆತ್ಮಿಕ ಯುದ್ಧ ನಡೆಯಲಿದೆ ಎಂದು ಪ್ರವಾದಿಸಿದ್ದಾರೆ. ದೇವರು ರಕ್ಷಿಸಲ್ಪಡುವವರನ್ನು ರಕ್ಷಿಸಲ್ಪಡದವರಿಂದ ಬೇರ್ಪಡಿಸುವಾಗ, ತಾಯಿ ದೇವರಾದ ಸ್ತ್ರೀಯ ಪರವಾಗಿ ನಿಲ್ಲುವ ಮೂಲಕ ಮಾತ್ರ ನಾವು ಮಹಾ ಆತ್ಮಿಕ ಯುದ್ಧವನ್ನು ಗೆಲ್ಲಬಹುದು ಮತ್ತು ಆತ್ಮರಕ್ಷಣೆಯ ಆಶೀರ್ವಾದವನ್ನು ಸ್ವೀಕರಿಸಬಹುದು.
ಭೂಲೋಕ ಕುಟುಂಬ ವ್ಯವಸ್ಥೆ ಮತ್ತು ಹವ್ವಳ ಸೃಷ್ಟಿ ಪ್ರಕ್ರಿಯೆಯ ಮೂಲಕ ತಾಯಿ ದೇವರು ಅಸ್ತಿತ್ವದಲ್ಲಿದ್ದಾರೆ ಮತ್ತು ಸ್ತ್ರೀಯ ಸಂತಾನದಲ್ಲಿ ಉಳಿದವರು ಚರ್ಚ್ ಆಫ್ ಗಾಡ್ ಸದಸ್ಯರು, ಯೆರೂಸಲೇಮ್ ತಾಯಿಯ ಮಹಿಮೆಯನ್ನು ಲೋಕಕ್ಕೆ ಬೋಧಿಸಬೇಕು ಎಂದು ಅನ್ ಸಂಗ್ ಹೊಂಗ್ ದೇವರು ನಮಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟು ಸಮುದ್ರತೀರದ ಮರಳಿನ ಮೇಲೆ ನಿಂತನು. ಪ್ರಕಟನೆ 12:17-18
ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇವಿುಸಿದ್ದೇನೆ; ಅವರು ಹಗಲೂ ಇರುಳೂ ಮೌನವಾಗಿರರು. ಯೆಹೋವನಿಗೆ ಜ್ಞಾಪಿಸುವವರೇ, ಆತನು ಯೆರೂಸಲೇಮನ್ನು ಭದ್ರಪಡಿಸಿ ಲೋಕಪ್ರಸಿದ್ಧಿಗೆ ತರುವ ತನಕ ನಿಮಗೆ ವಿರಾಮವಿಲ್ಲದಿರಲಿ, ಆತನಿಗೂ ವಿರಾಮಕೊಡದಿರಿ. ಯೆಶಾಯನು 62:6-7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ