“ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ನೀವು ತಿನ್ನಬಾರದು,” ಎಂಬ ದೇವರ ನಿಯಮವನ್ನು ಮರೆತಿದ್ದರಿಂದ ಆದಾಮ ಮತ್ತು ಹವ್ವಳು ಪಾಪ ಮಾಡಿದಂತೆಯೇ, ನಾವು ದೇವರ ನಿಯಮವನ್ನು ಮರೆತಾಗಲೆಲ್ಲಾ ನಾವು ಪಾಪವನ್ನು ಮಾಡುತ್ತೇವೆ ಮತ್ತು ವಿಪತ್ತುಗಳನ್ನು ಸ್ವೀಕರಿಸುತ್ತೇವೆ.
ಈ ಕಾಲದಲ್ಲಿಯೂ ಸಹ, ದೇವರು ಕೊನೆಯ ವಿಪತ್ತು ಬರಲಿದೆ ಎಂದು ಹೇಳುತ್ತಾರೆ ಏಕೆಂದರೆ ಲೋಕವು ದೇವರ ನಿಯಮಗಳಾದ - ಸಬ್ಬತ್ ದಿನ ಮತ್ತು ಹೊಸ ಒಡಂಬಡಿಕೆಯ ಪಸ್ಕ ಹಬ್ಬವನ್ನು ಮರೆತು ಅವುಗಳನ್ನು ಕೈಗೊಳ್ಳುತ್ತಿಲ್ಲ.
ಮಾನವರು ಪರಲೋಕದಲ್ಲಿ ಪಾಪಮಾಡಿ ಈ ಭೂಮಿಗೆ ದೊಬ್ಬಲ್ಪಟ್ಟ ಆತ್ಮಗಳು [ದೇವದೂತರು].
ಅವರು ಈ ಭೂಮಿಯ ಮೇಲೆ ಜೀವಿಸುವಾಗ ದೇವರ ವಾಕ್ಯಕ್ಕೆ ವಿಧೇಯರಾದಾಗ ಮಾತ್ರ ಪರಲೋಕಕ್ಕೆ ಹಿಂತಿರುಗಬಹುದು.
ಅರಸ ಹಿಜ್ಕೀಯನು ನಿಯಮವನ್ನು [ಪಸ್ಕಹಬ್ಬವನ್ನು] ಕೈಗೊಂಡು ಆಶೀರ್ವಾದಗಳನ್ನು ಸ್ವೀಕರಿಸಿದಂತೆಯೇ, ದೇವರ ವಾಕ್ಯದ ಪ್ರಕಾರ, ಚರ್ಚ್ ಆಫ್ ಗಾಡ್ ದೇವರ ನಿಯಮವಾದ ಹೊಸ ಒಡಂಬಡಿಕೆಯನ್ನು ಕೈಗೊಂಡು ದೇವರ ಚಿತ್ತಕ್ಕೆ ವಿಧೇಯರಾಗುತ್ತಾರೆ.
ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಯೆಹೋವನ ಆಜ್ಞಾವಿಧಿನಿರ್ಣಯಗಳನ್ನು ಕೈಕೊಳ್ಳದವರೂ ಆತನನ್ನು ಮರೆಯುವವರೂ ಆಗಬೇಡಿರಿ, ನೋಡಿರಿ.
ಧರ್ಮೋಪದೇಶಕಾಂಡ 8:11
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.
ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? . . . ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು.
. . . ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.
ಮತ್ತಾಯ 7:21-23
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ