ಈ ಭೂಮಿಯ ಮೇಲಿನ ಜೀವನವು ಅಂತ್ಯವಲ್ಲ ಎಂದು ಯೇಸು ಶ್ರೀಮಂತ ವ್ಯಕ್ತಿ ಮತ್ತು ಲಾಜರನ ಸಾಮತಿಗಳ ಮೂಲಕ ಮನುಕುಲಕ್ಕೆ ಕಲಿಸಿದರು. ಲಾಜರನು, ಭೂಮಿಯ ಮೇಲೆ ಬಡವನಾಗಿದ್ದರೂ, ಪರಲೋಕದ ನಿರೀಕ್ಷೆಯೊಂದಿಗೆ ಪ್ರಯಾಣಿಕನಾಗಿ ಬದುಕಿದನು ಮತ್ತು ಅಂತಿಮವಾಗಿ ಸಂತೋಷವನ್ನು ಕಂಡುಕೊಂಡನು.
ಮತ್ತೊಂದೆಡೆ, ಐಶ್ವರ್ಯವಂತನು ಭೋಗದ ಜೀವನವನ್ನು ನಡೆಸಿದನು, ಆದರೆ ಅವನು ಅಲೆಮಾರಿಯಾಗಿ ಬದುಕಿದನು.
ಅವನು ಪರಲೋಕ ರಾಜ್ಯಕ್ಕಾಗಿ ಸಿದ್ಧತೆ ಮಾಡಲು ವಿಫಲನಾದನು ಮತ್ತು ಅಂತಿಮವಾಗಿ ನರಕದಲ್ಲಿ ಯಾತನೆಯನ್ನು ಅನುಭವಿಸಿದನು.
“ನಾವು ಈ ಭೂಮಿಯ ಮೇಲೆ ಪರದೇಶದವರೂ ಮತ್ತು ಪ್ರಯಾಣಿಕರು” ಎಂದು ಹೇಳಿದ ಅಬ್ರಹಾಮ ಮತ್ತು ಮೋಶೆಯಂತಹ ನಂಬಿಕೆಯ ಪೂರ್ವಜರ ಪುರಾವೆಯನ್ನು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಮನುಕುಲಕ್ಕೆ ನೀಡಿದರು.
ಸತ್ಯವೇದದಲ್ಲಿರುವ ಈ ದಾಖಲೆಗಳ ಮೂಲಕ, ಅವರು ಹಿಂತಿರುಗಬೇಕಾದ ತಮ್ಮ ನಿಜವಾದ ಮನೆ ಪರಲೋಕ ರಾಜ್ಯವೆಂಬುದನ್ನು ಎಲ್ಲಾ ಮನುಕುಲಕ್ಕೆ ತಿಳಿಸಿದರು.
ಇವರೆಲ್ಲರು ವಾಗ್ದಾನದ ಫಲಗಳನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳೂ ಆಗಿದ್ದೇವೆಂದು ಒಪ್ಪಿಕೊಂಡರು.
ಇಬ್ರಿಯರಿಗೆ 11:13
ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.
ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; . . . ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ . . .
ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.”
ಯೋಹಾನನು 14:1-3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ