ಈ ಯುಗದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಪ್ರವಾದಿಸಿದಂತೆ ಈ ಭೂಮಿಗೆ ಬಂದು, ಚರ್ಚ್ ಆಫ್ ಗಾಡ್ ಅನ್ನು ಸ್ಥಾಪಿಸಿದರು ಮತ್ತು “ನಾನು ತಾಯಿಯನ್ನು ಹಿಂಬಾಲಿಸುವೆನು” ಎಂದು ಹೇಳುತ್ತಾ ಪರಲೋಕ ತಾಯಿ ಯೆರೂಸಲೇಮನ್ನು ಪ್ರಕಟಿಸಿದರು. ಪ್ರವಾದಿಸಿದಂತೆಯೇ, ಪರಲೋಕ ತಾಯಿ ಯೆರೂಸಲೇಮಿನ ಮಹಿಮೆಯು ಈ ಕತ್ತಲೆಯ ಲೋಕದಲ್ಲಿ ನಿರೀಕ್ಷೆಯ ಬೆಳಕಾಗಿದೆ.
ಇದು ದೇವರು ನಡೆಸುತ್ತಿರುವ ಸುವಾರ್ತೆ ಎಂದು ನಂಬಿ ಸದಸ್ಯರು ಯೆರೂಸಲೇಮಿನ ಬೆಳಕನ್ನು ಪ್ರಕಾಶಿಸಿದ ಪರಿಣಾಮವಾಗಿ, ಲೋಕದಾದ್ಯಂತದ ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳ ಜನರು ಚೀಯೋನಿಗೆ ಹಿಂತಿರುಗಲು ಆತುರಪಡುತ್ತಿದ್ದಾರೆ. ಪ್ರವಾದನೆಗಳನ್ನು ನಂಬಿ ಪರಲೋಕ ತಾಯಿ ಯೆರೂಸಲೇಮಿನ ಮಹಿಮೆಯನ್ನು ಪ್ರಕಾಶಿಸಿದ ತನ್ನ ಮಕ್ಕಳಿಗೆ, ದೇವರು, “ಅವರೇ ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವರು” ಎಂಬ ತಮ್ಮ ವಾಗ್ದಾನವನ್ನು ನೆರವೇರಿಸುತ್ತಾರೆ.
ಇಗೋ, ಕತ್ತಲು ಭೂವಿುಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು. ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು, ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು. ಯೆಶಾಯನು 60:2–3
ಆದರೆ ರಾಜ್ಯವು ಪರಾತ್ಪರನ ಭಕ್ತರಿಗೆ ಲಭಿಸುವದು, ಅವರೇ ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವರು ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು. ದಾನಿಯೇಲನು 7:18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ