ಯೇಸು ಮನುಷ್ಯರಾಗಿ ಬಂದು, ಮನುಷ್ಯರ ಆಹಾರವನ್ನು ಸೇವಿಸಿ, ಮನುಷ್ಯರಂತೆಯೇ ಜೀವಿಸಿದ್ದರಿಂದ, ಅಸಂಖ್ಯಾತ ಜನರು ಅವರನ್ನು ದೇವರೆಂದು ಗುರುತಿಸಲು ವಿಫಲರಾಗಿ, ತಿರಸ್ಕರಿಸಿದರು. ಈ ಕಾರಣದಿಂದಲೇ ಸತ್ಯವೇದವು ನಮಗೆ, ಯೇಸು ಶರೀರದಲ್ಲಿ ಬಂದಿದ್ದಾರೆಂದು ಒಪ್ಪಿಕೊಳ್ಳುವ ಪ್ರತಿಯೊಂದು ಆತ್ಮವು ದೇವರಿಂದ ಬಂದಿದೆ ಮತ್ತು ಇದನ್ನು ಒಪ್ಪಿಕೊಳ್ಳದ ಪ್ರತಿಯೊಂದು ಆತ್ಮವು ಕ್ರಿಸ್ತ ವಿರೋಧಿಯ ಆತ್ಮವಾಗಿದೆ ಎಂದು ಬೋಧಿಸುತ್ತದೆ.
ಪವಿತ್ರಾತ್ಮನ ಕಾಲದಲ್ಲಿ, ಮನುಕುಲವನ್ನು ರಕ್ಷಿಸಲು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಬಂದಿದ್ದಾರೆ. ಮನುಕುಲವು ದೇವರಿಂದ ಆತ್ಮರಕ್ಷಣೆಯ ಆಶೀರ್ವಾದವನ್ನು ಸ್ವೀಕರಿಸಲು, ಮೊದಲು ಅವರು ತಮ್ಮದೇ ಆದ ಕಲ್ಪನೆಗಳನ್ನು ಬದಿಗಿಟ್ಟು, ದೇವರು ಎರಡನೆಯ ಸಾರಿ ಶರೀರದಲ್ಲಿ ಬರುತ್ತಾರೆ ಎಂದು ಘೋಷಿಸುವ ಸತ್ಯವೇದದ ಪ್ರವಾದನೆಯನ್ನು ನಂಬಬೇಕು.
ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ. ಏಕಂದರೆ ದೇವರು ಒಬ್ಬನೇ; ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ;... 1 ತಿಮೊಥೆಯನಿಗೆ 2:4–5
ಪ್ರೇರಿಸುವಂಥವನು ದೇವರ ಆತ್ಮನೇ ಎಂದು ತಿಳಿದುಕೊಳ್ಳುವದಕ್ಕೆ ಲಕ್ಷಣವೇನಂದರೆ - ಮನುಷ್ಯನಾಗಿ ಬಂದ ಯೇಸು ಕ್ರಿಸ್ತನನ್ನು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾದದ್ದು. ಯೇಸುವನ್ನು ಒಪ್ಪದೆ ಇರುವ ಆತ್ಮವು ದೇವರಿಂದ ಪ್ರೇರಿತವಾದದ್ದಲ್ಲ; ಅದು ಕ್ರಿಸ್ತ ವಿರೋಧಿಯ ಆತ್ಮವಾಗಿದೆ... 1 ಯೋಹಾನನು 4:2–3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ