ದೀರ್ಘಕಾಲದವರೆಗೆ ನಾವೆಯನ್ನು ನಿರ್ಮಿಸುವಾಗ ಒಂಟಿತನವನ್ನು ಎದುರಿಸಿದರೂ ನೋಹನು ದೇವರ ಆಶೀರ್ವಾದವನ್ನು ನಂಬಿದನು. ಮೋಶೆ ಐಗುಪ್ತದಲ್ಲಿ ರಾಜಕುಮಾರನಾಗಿ ತನ್ನ ಮಹಿಮೆಯನ್ನು ಅನುಭವಿಸುವ ಬದಲು ದೇವರ ಜನರೊಂದಿಗೆ ಕಷ್ಟವನ್ನು ಅನುಭವಿಸಲು ಇಷ್ಟಪಟ್ಟನು. ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದರೂ ಸಹ, ಜನರಿಗೆ ಪರಲೋಕ ರಾಜ್ಯವನ್ನು ಅರ್ಪಿಸಲು ಸಿಕ್ಕ ಅವಕಾಶದಲ್ಲಿ ಅಪೊಸ್ತಲ ಪೌಲನು ಸಂತೋಷಪಟ್ಟನು. ಅದೇ ರೀತಿ, ಚರ್ಚ್ ಆಫ್ ಗಾಡ್ ಸದಸ್ಯರು ತಮ್ಮ ಶಿಲುಬೆಗಳನ್ನು ಹೊತ್ತುಕೊಂಡು ನಂಬಿಕೆಯ ಹಾದಿಯಲ್ಲಿ ಸಂತೋಷದಿಂದ ನಡೆಯುತ್ತಾರೆ.
ಪರಲೋಕ ತಾಯಿ ಯಾವಾಗಲೂ ನಮಗೆ, “ನಮಗೆ ಪರಲೋಕರಾಜ್ಯದ ನಿರೀಕ್ಷೆ ಇದೆ, ಅಲ್ಲವೇ?” ಎಂದು ನೆನಪಿಸುತ್ತಾರೆ. ಆದ್ದರಿಂದ, ಮೊದಲಸಾಲಿನಲ್ಲಿ ಕೆಲಸ ಮಾಡುವ ದೇವಜನರಾಗಲಿ ಅಥವಾ ಯಾಜಕ ಸಿಬ್ಬಂದಿಯಾಗಿರಲಿ, ಪ್ರತಿಯೊಬ್ಬರೂ ತಮ್ಮ ಸ್ವಂತ ಶಿಲುಬೆಗಳನ್ನು ಹೊತ್ತುಕೊಂಡು ನಮ್ಮ ಕಣ್ಣುಗಳ ಮುಂದೆ ತೆರೆದುಕೊಳ್ಳುವ ಅಡೆತಡೆಗಳನ್ನು ಮೀರಿ ಸಿದ್ಧಪಡಿಸಲಾದ ಪರಲೋಕರಾಜ್ಯದ ಆಶೀರ್ವಾದಗಳನ್ನು ನೋಡಬೇಕು.
ಐಗುಪ್ತದೇಶದ ಸರ್ವೈಶ್ವರ್ಯಕ್ಕಿಂತಲೂ ಕ್ರಿಸ್ತನ ನಿವಿುತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು; ಯಾಕಂದರೆ ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು. ಇಬ್ರಿಯರಿಗೆ 11:26
ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವದು ನಿಶ್ಚಯ; ನೀವು ಪವಿತ್ರಾತ್ಮನಿಂದ ದೇಹದ ದುರಭ್ಯಾಸಗಳನ್ನು ನಾಶ ಮಾಡುವದಾದರೆ ಜೀವಿಸುವಿರಿ. ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು. . . . ಹೇಗಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು. ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ. ರೋಮಾಪುರದವರಿಗೆ 8:13-18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ