“ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸುಮಾಡುವವರೆಲ್ಲರೂ ಹಿಂಸೆಗೊಳಗಾಗುವರು” ಎಂದು ಬರೆಯಲ್ಪಟ್ಟಿರುವಂತೆ ಮತ್ತು ಯೇಸು, “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ . . . ತನ್ನ ಶಿಲುಬೆಯನ್ನು . . . ಹೊತ್ತುಕೊಂಡು ನನ್ನ ಹಿಂದೆ ಬರಲಿ” ಎಂದು ಹೇಳಿದಂತೆ, ಪರಲೋಕ ರಾಜ್ಯದ ಮಹಿಮೆಗಾಗಿ ಜೀವಿಸುವ ಎಲ್ಲರ ಜೀವನದಲ್ಲಿ ಸ್ವಲ್ಪ ಕಾಲದ ಕಷ್ಟವು ಖಂಡಿತವಾಗಿಯೂ ಬರುತ್ತದೆ.
ಏಸಾವ ಮತ್ತು ಇಸ್ಕರಿಯೋತ ಯೂದ ಶರೀರಭಾವಕ್ಕನುಗುಣವಾಗಿ ಬದುಕಿ, ಪಾಪದ ಸುಖಭೋಗಗಳನ್ನು ಬೆನ್ನಟ್ಟಿ, ಅಂತಿಮವಾಗಿ ಪರಲೋಕರಾಜ್ಯದ ಆಶೀರ್ವಾದಗಳನ್ನು ಕಳೆದುಕೊಂಡರು. ಎಷ್ಟಾದರೂ, ಮೋಶೆ, ಯಾಕೋಬ, ದಾನಿಯೇಲ ಮತ್ತು ಆತನ ಮೂವರು ಸ್ನೇಹಿತರು ಪರಲೋಕದ ಸಂತೋಷವನ್ನು ಹೆಚ್ಚಾಗಿ ಪರಿಗಣಿಸಿ ಕಷ್ಟಗಳನ್ನು ಜಯಿಸಿದರು. ಅದೇ ರೀತಿ, ಚರ್ಚ್ ಆಫ್ ಗಾಡ್ ಸದಸ್ಯರು ದೇವರು ವಾಗ್ದಾನ ಮಾಡಿದ ಪರಲೋಕದ ಆನಂದದಲ್ಲಿ ತಮ್ಮ ನಿರೀಕ್ಷೆಯನ್ನು ಇಟ್ಟು, ಆತನು ಆಜ್ಞಾಪಿಸಿದಂತೆ ಹೊಸ ಒಡಂಬಡಿಕೆಯ ಸಬ್ಬತ್ ದಿನ ಮತ್ತು ಪಸ್ಕ ಹಬ್ಬದ ಆಶೀರ್ವಾದಗಳನ್ನು ಬೋಧಿಸಲು ತಮ್ಮನ್ನೇ ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ.
ಮೋಶೆಯು ದೊಡ್ಡವನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ. ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು. ಐಗುಪ್ತದೇಶದ ಸರ್ವೈಶ್ವರ್ಯಕ್ಕಿಂತಲೂ ಕ್ರಿಸ್ತನ ನಿವಿುತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು; ಯಾಕಂದರೆ ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು. ಇಬ್ರಿಯರಿಗೆ 11:24–26
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ