ಇಸ್ರಾಯೇಲ್ಯರು ಐಗುಪ್ತದಿಂದ ಹೊರಟುಬಂದಾಗ, ಐಗುಪ್ತದ ಮೇಲೆಲ್ಲಾ ವಿಪತ್ತುಗಳು ಬಂದವು, ಆದರೆ ಇಸ್ರಾಯೇಲ್ಯರ ಮೇಲೆ ಬರಲಿಲ್ಲ. ಇದು ದೇವರ ಒಡಂಬಡಿಕೆ ಇದ್ದ ಸ್ಥಳಕ್ಕೂ ಇಲ್ಲದ ಸ್ಥಳಕ್ಕೂ ಇದ್ದ ವ್ಯತ್ಯಾಸವಾಗಿತ್ತು. ದೇವರ ಆಜ್ಞೆಯಾದ ಹೊಸ ಒಡಂಬಡಿಕೆಯ ಪಸ್ಕ ಹಬ್ಬವನ್ನು ಕೈಕೊಳ್ಳುವ ಸ್ಥಳದಲ್ಲಿ, ಆತನ ಜನರು ಒಳಗೆ ಬರುವಾಗಲೂ ಹೊರಗೆ ಹೋಗುವಾಗಲೂ ಆಶೀರ್ವಾದ ಹೊಂದುವರು ಮತ್ತು ದೇವರು ಅವರನ್ನು ಭೂಮಿಯ ಎಲ್ಲಾ ಜನಾಂಗಗಳಿಗಿಂತ ಉನ್ನತಪಡಿಸುವರೆಂಬ ಮಹಾ ವಾಗ್ದಾನವನ್ನು ನೀಡಿದ್ದಾರೆ.
ದೇವರ ಸಬ್ಬತ್ ದಿನ ಮತ್ತು ಪಸ್ಕ ಹಬ್ಬವನ್ನು ಒಳಗೊಂಡಿರುವ ಹೊಸ ಒಡಂಬಡಿಕೆಯನ್ನು ಲೋಕವು ಕೈಗೊಳ್ಳದ ಕಾರಣ, ಈ ಭೂಮಿಯ ಮೇಲೆ ಬೆಂಕಿಯ ಮಹಾ ವಿಪತ್ತು ಬರುವುದೆಂದು ಪ್ರವಾದಿಗಳಾದ ಯೆಶಾಯನು, ಚೆಫನ್ಯನು ಮತ್ತು ಪೇತ್ರನು ಸಾಕ್ಷಿಕರಿಸುತ್ತಾರೆ. ದೇವರ ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಮಾತ್ರ ಮನುಕುಲವು ತಂದೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಮಕ್ಕಳಾಗಬಹುದು ಹಾಗೂ ಎಲ್ಲಾ ವಿಪತ್ತುಗಳಿಂದ ದೇವರ ರಕ್ಷಣೆಯನ್ನು ಪಡೆಯಬಹುದೆಂದು ಸತ್ಯವೇದವು ಸಾಕ್ಷಿಕರಿಸುತ್ತದೆ.
ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ ಆತನು ಭೂವಿುಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು. ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಶುಭಗಳೆಲ್ಲಾ ನಿಮಗೆ ಪ್ರಾಪ್ತವಾಗುವವು. ಯಾವವಂದರೆ - . . . ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಶುಭವುಂಟಾಗುವದು. ಧರ್ಮೋಪದೇಶಕಾಂಡ 28:1–6
ಈ ಮಾತುಗಳನ್ನೆಲ್ಲಾ ಈ ಜನರಿಗೆ ತಿಳಿಸುತ್ತಿರುವ ನಿನಗೆ ಪ್ರತ್ಯುತ್ತರವಾಗಿ ಅವರು - ಈ ಮಹಾ ವಿಪತ್ತು ನಮಗೆ ಸಂಭವಿಸಬೇಕೆಂದು ಯೆಹೋವನು ಏಕೆ ವಿಧಿಸಿದ್ದಾನೆ? ನಮ್ಮ ಅಪರಾಧವೇನು? ನಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ನಾವು ಮಾಡಿದ ಪಾಪವೇನು ಎಂದು ಕೇಳುವಾಗ ನೀನು ಅವರಿಗೆ ಹೀಗೆ ಹೇಳಬೇಕು - ಯೆಹೋವನ ಮಾತನ್ನು ಕೇಳಿರಿ, ನಿಮ್ಮ ಪಿತೃಗಳು ನನ್ನನ್ನು ತೊರೆದು ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸಿ ಪೂಜಿಸಿ ನನ್ನನ್ನು ಬಿಟ್ಟು ನನ್ನ ಧರ್ಮವಿಧಿಗಳನ್ನು ಮೀರಿದ್ದರಿಂದಲೂ... ಯೆರೆಮೀಯನು 16:10–11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ