ದೇವರ ಮಕ್ಕಳು ದೇವರ ಬೋಧನೆಗಳ ಪ್ರಕಾರ ಲೋಕಕ್ಕೆ ಉಪ್ಪು ಮತ್ತು ಬೆಳಕಾದಾಗ, ತಮ್ಮ ಸತ್ಕಾರ್ಯಗಳ ಮೂಲಕ ದೇವರ ಮಹಿಮೆಯನ್ನು ಪ್ರದರ್ಶಿಸಿದಾಗ ಮತ್ತು ಹೊಸ ಒಡಂಬಡಿಕೆಯ ಸತ್ಯದೊಂದಿಗೆ ಮನುಕುಲವನ್ನು ದೇವರ ಕಡೆಗೆ ಮುನ್ನಡೆಸುವಾಗ, ದೇವರು ಸಂತೋಷಪಡುತ್ತಾರೆ ಹಾಗೂ ಅವರು ದೇವರ ಮುಂದೆ ನಿಲ್ಲುವ ದಿನದಂದು ಅವರಿಗೆ ಹೇರಳವಾದ ಆಶೀರ್ವಾದಗಳನ್ನು ನೀಡುತ್ತಾರೆ.
ನಾವು ಪವಿತ್ರಾತ್ಮನ ಕಾಲದಲ್ಲಿ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಯೆರೂಸಲೇಮ್ ಪರಲೋಕದ ತಾಯಿಯನ್ನು ಸ್ವೀಕರಿಸಿದ್ದರೆ, ಇಂದಿನಿಂದ ನಾವು ಲೋಕದಿಂದ ಕಲಿತ ದುಷ್ಟ ಅಭ್ಯಾಸಗಳನ್ನು ತ್ಯಜಿಸಿ ಕ್ರೈಸ್ತರಾಗಿ ಹೊಸ ಸ್ವಭಾವವನ್ನು ಧರಿಸಿಕೊಳ್ಳಬೇಕು. ಈ ಲೋಕವು ತನ್ನ ದೈವಭಕ್ತಿಯನ್ನು ಹೆಚ್ಚು ಹೆಚ್ಚು ಕಳೆದುಕೊಳ್ಳುತ್ತಾ, ಕೆಟ್ಟ ಮತ್ತು ದುಷ್ಟತನಕ್ಕೆ ತಿರುಗುತ್ತಿರುವಾಗ, ನೋಹ ಮತ್ತು ಲೋಟನ ದಿನಗಳಲ್ಲಿದ್ದಂತೆ ದೇವರ ನ್ಯಾಯತೀರ್ಪಿನ ದಿನವು ಹತ್ತಿರವಾಗಿದೆ ಎಂದು ನಾವು ಅರಿತುಕೊಳ್ಳಬೇಕು ಮತ್ತು ಇನ್ನಷ್ಟು ಭಕ್ತಿಯುಳ್ಳ ಜೀವನವನ್ನು ನಡೆಸಬೇಕು.
ಆದದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ - ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು. ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ. ರೋಮಾಪುರದವರಿಗೆ 12:1–2
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ